ಪೃಥ್ವಿಗೆ ಹಲವು ತೆರ, ಅಪ್ಪುವಿಗೆ ನಾನಾ ಸಾರ.
ಅಗ್ನಿಗೆ ಹಲವು ಘಟಕ್ಷುಧೆ, ವಾಯುವಿಗೆ ನಾನಾ ರೂಪು ಸಂಚಾರ.
ಆಕಾಶಕ್ಕೆ ಬಹುವರ್ಣ ಚೇತನ.
ಇಂತೀ ದೃಕ್ಕಿಂಗೆ ಲಕ್ಷ್ಯವಿದ್ದಂತೆ ಲಕ್ಷಿಸಿ,
ಕಂಡಂತೆ ಕಂಡು, ಸದ್ಗುಣ ಆರೆಂದಂತೆಯೆಂದಡೆಂದು,
ಮನಕ್ಕೆ ಕುರುಹುದೋರದೆ, ತನ್ನ ತಾನರಿದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನ ಭಿನ್ನರೂಪನಲ್ಲ.
Art
Manuscript
Music
Courtesy:
Transliteration
Pr̥thvige halavu tera, appuvige nānā sāra.
Agnige halavu ghaṭakṣudhe, vāyuvige nānā rūpu san̄cāra.
Ākāśakke bahuvarṇa cētana.
Intī dr̥kkiṅge lakṣyaviddante lakṣisi,
kaṇḍante kaṇḍu, sadguṇa ārendanteyendaḍendu,
manakke kuruhudōrade, tanna tānaridalli,
niḥkaḷaṅka mallikārjuna bhinnarūpanalla.