ಪೃಥ್ವಿಯ ಗುಣವ ಅಪ್ಪು ನುಂಗಿತ್ತಾಗಿ, ಪೃಥ್ವಿಯ ಗುಣವಿಲ್ಲ.
ಅಪ್ಪುವಿನ ಗುಣವ ಅನಲ ನುಂಗಿತ್ತಾಗಿ, ಅಪ್ಪುವಿನ ಗುಣವಿಲ್ಲ.
ಅನಲನ ಗುಣವ ಅನಿಲ ನುಂಗಿತ್ತಾಗಿ, ಅನಲನ ಗುಣವಿಲ್ಲ.
ಅನಿಲನ ಗುಣವ ಆಕಾಶ ನುಂಗಿತ್ತಾಗಿ, ಅನಿಲನ ಗುಣವಿಲ್ಲ
ಅನಿಲನ ಗುಣವ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ.
ಆಕಾಶದ ಗುಣವ ತನ್ನ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ.
ಇದು ಕಾರಣ, ಐದರ ಗುಣದಲ್ಲಿ ಅರ್ಪಿಸಿ,
ಮುಕ್ತಿಯ ಕಂಡೆಹೆನೆಂಬ ನಿಷ್ಠೆ ನಿನಗೆಲ್ಲಿಯದೊ ?
ಹೊಯ್ದಿರಿಸಿದ ಹೊಯ್ಗಲದಂತೆ
ಭೋಗಿಸಿಹೆನೆಂದಡೆ ಕರ್ತೃತ್ವವಿಲ್ಲ.
ದರುಶನವ ಹೊತ್ತು ಹೊತ್ತು ತಿರುಗುವುದಕ್ಕಲ್ಲದೆ, ಜ್ಞಾನಕ್ಕೆ ಸಂಬಂಧಿಗಳಲ್ಲ.
ಐದರ ಗುಣವಡಗಿ, ಮೂರರ ಗುಣ ಮುಗಿದು,
ಆರರ ಗುಣ ಹಾರಿ, ಎಂಟರ ಗುಣದ [ನೆ]ಂಟತನವ ಬಂಧಿಸಿ,
ತೋರುವುದಕ್ಕೆ ಮುನ್ನವೆ ಮನ ಜಾರಿ ನಿಂದ ಮತ್ತೆ ಮೀರಲಿಲ್ಲವಾಗಿ,
ಸ್ವಯ ಚರ ಪರ ತ್ರಿವಿಧವನರಿದು ಹೊರಗಾಗಿ,
ಮೂರು ಮಾಟದ ಬೆಡಗನರಿದು ವಿಚಾರಿಸದೆ,
ಉದರ ಘಾತಕತನಕ್ಕೆ ಹೊಟ್ಟೆಹೊರಕರೆಲ್ಲ ಜಂಗಮವೆ ? ಅಂತಲ್ಲ, ನಿಲ್ಲಿರಣ್ಣಾ.
ನೀವೆ ಲಿಂಗ ಜಂಗಮವಾಗಬಲ್ಲಡೆ ನಾನೆಂಬುದ ವಿಚಾರಿಸಿಕೊಳ್ಳಿರಣ್ಣಾ.
ನೀವು ಪೂಜೆಯ ಮಾಡಿಸಿಕೊಂಬುದಕ್ಕೆ ವಿವರ :
ಪೂಜೆಯ ಮಾಡುವ ಭಕ್ತಂಗೆ,
ಭಾರಣೆಯ ವಿದ್ಯವ ಹೊತ್ತ ವಿಧಾತೃನಂತಿರಬೇಕು.
ಜಲವ ನಂಬಿದ ಜಲಚರದಂತಿರಬೇಕು,
ಆಡುವ ಪಶುವಿನ ಲಾಗಿನಂತಿರಬೇಕು.
ಇಂತಿವನೆಲ್ಲವಂ ಕಳೆದುಳಿದು, ಆ ಚರಲಿಂಗಮೂರ್ತಿ ತಾನಾಗಿ ನಿಂದಾತನೆ
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Pr̥thviya guṇava appu nuṅgittāgi, pr̥thviya guṇavilla.
Appuvina guṇava anala nuṅgittāgi, appuvina guṇavilla.
Analana guṇava anila nuṅgittāgi, analana guṇavilla.
Anilana guṇava ākāśa nuṅgittāgi, anilana guṇavilla
anilana guṇava tannane nuṅgittāgi, ākāśada guṇavilla.
Ākāśada guṇava tanna tannane nuṅgittāgi, ākāśada guṇavilla.
Idu kāraṇa, aidara guṇadalli arpisi,
muktiya kaṇḍ'̔ehenemba niṣṭhe ninagelliyado?
Hoydirisida hoygaladante
bhōgisihenendaḍe kartr̥tvavilla
Daruśanava hottu hottu tiruguvudakkallade, jñānakke sambandhigaḷalla.
Aidara guṇavaḍagi, mūrara guṇa mugidu,
ārara guṇa hāri, eṇṭara guṇada [ne]ṇṭatanava bandhisi,
tōruvudakke munnave mana jāri ninda matte mīralillavāgi,
svaya cara para trividhavanaridu horagāgi,
mūru māṭada beḍaganaridu vicārisade,
udara ghātakatanakke hoṭṭehorakarella jaṅgamave? Antalla, nilliraṇṇā.
Nīve liṅga jaṅgamavāgaballaḍe nānembuda vicārisikoḷḷiraṇṇā.
Nīvu pūjeya māḍisikombudakke vivara:
Pūjeya māḍuva bhaktaṅge,
bhāraṇeya vidyava hotta vidhātr̥nantirabēku.
Jalava nambida jalacaradantirabēku,
āḍuva paśuvina lāginantirabēku.
Intivanellavaṁ kaḷeduḷidu, ā caraliṅgamūrti tānāgi nindātane
niḥkaḷaṅka mallikārjunā.