Index   ವಚನ - 502    Search  
 
ಪೃಥ್ವಿಯ ಪೃಥ್ವಿ ಎಲ್ಲಿಪ್ಪುದು ? ಅಪ್ಪುವಿನ ಅಪ್ಪು ಎಲ್ಲಿಪ್ಪುದು? ತೇಜದ ತೇಜ ಎಲ್ಲಿಪ್ಪುದು ? ವಾಯುವಿನ ವಾಯು ಎಲ್ಲಿಪ್ಪುದು ? ಆಕಾಶದ ಆಕಾಶ ಎಲ್ಲಿಪ್ಪುದು ? ಇಂತೀ ಭೇದಂಗಳನರಿವುದಕ್ಕೆ ದೃಷ್ಟ, ಆತ್ಮಕ್ಕೆ ಆತ್ಮನ ಪ್ರತಿರೂಪ ಕಂಡಲ್ಲಿ. ಇಂತೀ ಇವಕ್ಕೆ ಉಭಯನಾಮವುಂಟು. ಪೃಥ್ವಿಗೆ ಆಧರಣೆ ಒಂದೇಮಯ. ಅಪ್ಪುವಿಗೆ ಸರ್ವಸಾರ ಒಂದೇ ಭೇದ. ತೇಜಕ್ಕೆ ಉಷ್ಣ ಹಲವು ಪರಿಯಿಲ್ಲ. ವಾಯುವಿಂಗೆ ಸಂಚಾರ ಕಡೆ ನಡು ಮೊದಲಿಲ್ಲ. ಇಂತಿವ ತಿಳಿದಡೆ ಒಂದೇ ಭೇದ, ಹೊಲಬನರಿದಡೆ ಹಲವು ಭೇದವುಂಟು, ನಿಃಕಳಂಕ ಮಲ್ಲಿಕಾರ್ಜುನಾ.