Index   ವಚನ - 519    Search  
 
ಬಯಲು ಬತ್ತಲೆಯಾದಡೆ ಹೊದಿಸುವರಿನ್ನಾರೊ ? ಏರಿ ನೀರ ಕುಡಿದಡೆ ಬಿಡಿಸುವರಿನ್ನಾರೊ ? ಮಹಾಮೇರು ನಡೆದಡೆ ಪಥಕಿಂಬುಗೊಡುವರಿನ್ನಾರೊ ? ಅರಿದವ ಮರೆದವನಾದಡೆ, ಅರಿಕೆಯ ಹೇಳುವರಿನ್ನಾರೊ ? ನಿಮ್ಮ ನಿಜವ ನೀವೇ ಬಲ್ಲಿರಿ. ನಾನಂಜುವೆ, ನಿಃಕಳಂಕ ಮಲ್ಲಿಕಾರ್ಜುನಾ.