Index   ವಚನ - 520    Search  
 
ಬಯಲೊಳಗಣ ಬಯಲಿನಲ್ಲಿ ಒಂದು ಕಲ್ಪತರು ಹುಟ್ಟಿ, ಫಲವಿಲ್ಲದೆ ಬಂಜೆಮರನಾದುದ ಕಂಡೆ. ಇದ ತಿಳಿದು ನೋಡಲಿಕ್ಕಾಗಿ ಬಯಲು ಬಯಲ ಕೂಡಿ, ಕಲ್ಪತರು ಫಲವು ಎಡಬಿಡವಿಲ್ಲದುದ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಲಾಗಿ.