Index   ವಚನ - 530    Search  
 
ಬಾವಿಯ ಓರೆಯ ಮೆಟ್ಟಿ ಜಾರಿಬಿದ್ದವರಾರೊ ? ಮೀರಿತ್ತು ಬಾವಿಯ ನೀರು. ತೋರಲಿಲ್ಲದಂತೆ ಮುಸುಕಿ ಮುಳುಗಿ ಹೋಹಾಗ, ಮೂರಡಿಯ ಕಪ್ಪೆಯ ಮರಿ ಬಂದು, ತೋರಲಿಲ್ಲದಂತೆ ನುಂಗಿತ್ತು, ಬಾವಿಯ ಓರೆಯ ಜಾರಿಬಿದ್ದಾತನ. ಇನ್ನಾರಿಗೆ ಹೇಳುವೆ, ಮೀರಿದ ಘನವ, ನಿಃಕಳಂಕ ಮಲ್ಲಿಕಾರ್ಜುನಾ.