ಬಿಂದು ನಾದವ ನುಂಗಿತ್ತೆಂಬರು, ನಾದ ಬಿಂದುವ ನುಂಗಿತ್ತೆಂಬರು.
ಕಳೆ ಬಿಂದುವ ನುಂಗಿತ್ತೆಂಬರು, ಬಿಂದು ಕಳೆಯ ನುಂಗಿತ್ತೆಂಬರು.
ಈ ಮೂರರ ಅಂದವ ಅತೀತ ತಿಂದಿತ್ತು, ತಿಂದವನ ತಿಂದ ಅಂದವ ನೋಡಾ.
ಇದಕ್ಕೊಂದೂ ಇಲ್ಲಾ ಎಂದೆ,
ಸಂದನಳಿದ ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bindu nādava nuṅgittembaru, nāda binduva nuṅgittembaru.
Kaḷe binduva nuṅgittembaru, bindu kaḷeya nuṅgittembaru.
Ī mūrara andava atīta tindittu, tindavana tinda andava nōḍā.
Idakkondū illā ende,
sandanaḷida niḥkaḷaṅka mallikārjunā.