Index   ವಚನ - 554    Search  
 
ಭಕ್ತಂಗೆ ಭಕ್ತಿಯ ಲಕ್ಷಣವೆಂತೆಂದಡೆ: ಕಳ್ಳ ಹಾದರಿಗ ಹಾವಾಡಿಗ ಆರಾದಡೂ ಶಿವಲಾಂಛನವ ತಾಳಿ ಬಂದಲ್ಲಿ, ಶಿವನೆಂದೇ ಪ್ರಮಾಣಿಸುವುದು. ಮಾಡುವಾತನ ಭಕ್ತಿಯ ಲಕ್ಷಣ ವರ್ಮವನರಿದು, ಮಾಡುವ ಸದ್ಭಕ್ತನ ಇರವೆಂತೆಂದಡೆ: ಒರತೆಯ ಘಟದಲ್ಲಿ ತೋರುವ ಚಿತ್ರ, ಚಿತ್ರವಪ್ಪುದೆ ? ಕತ್ತಲೆಯ ಮನೆಯಲ್ಲಿ ಒಪ್ಪುವ ಚಿತ್ತಾರದಂತೆ, ಚಿತ್ತಾರದಲ್ಲಿ ಅಡಗಿದ ನಿಶ್ಚಯದ ಲೆಕ್ಕಣಿಕೆಯಂತೆ, ಚಿತ್ತದೊಳಡಗಿದ ನಿಶ್ಚಯದಂತೆ ಹೀಗರಿದು ಮಾಡುವುದೇ ವರ್ಮಸ್ಥಲ, ಸಮೂಹದಲ್ಲಿ ಮಾಡುವುದೇ ಭಕ್ತಸ್ಥಲ. ಇಂತೀ ಉಭಯದಾವರ್ತವನರಿದಲ್ಲದೆ ಭಕ್ತನಲ್ಲ, ವಿರಕ್ತನಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.