ಭಕ್ತಂಗೆ ವಿಶ್ವಾಸ ಗುರುವೆಂದು ಪ್ರಮಾಣಿಸಿದಲ್ಲಿ,
ಪ್ರತ್ಯುತ್ತರವಿಲ್ಲದೆ ನಿಗರ್ವಿಯಾಗಿರಬೇಕು.
ಲಿಂಗವೆಂದು ಪ್ರಮಾಣಿಸಿದಲ್ಲಿ, ಸಂದೇಹವಿಲ್ಲದಿರಬೇಕು.
ಜಂಗಮವೆಂದು ಪ್ರಮಾಣಿಸಿದಲ್ಲಿ, ತ್ರಿವಿಧದ ಹಂಗಿಲ್ಲದಿರಬೇಕು.
ಇದರಂದ ಒಂದೂ ಇಲ್ಲದೆ ಭಕ್ತರಾದೆವೆಂಬ
ಮಿಟ್ಟೆಯಭಂಡರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaktaṅge viśvāsa guruvendu pramāṇisidalli,
pratyuttaravillade nigarviyāgirabēku.
Liṅgavendu pramāṇisidalli, sandēhavilladirabēku.
Jaṅgamavendu pramāṇisidalli, trividhada haṅgilladirabēku.
Idaranda ondū illade bhaktarādevemba
miṭṭeyabhaṇḍara nōḍā, niḥkaḷaṅka mallikārjunā.