ಭಕ್ತನಾದಲ್ಲಿ ಧರಿತ್ರಿಯಂತಿರಬೇಕು.
ಮಾಹೇಶ್ವರನಾದಲ್ಲಿ ಅಪ್ಪುವಿನಂತಿರಬೇಕು.
ಪ್ರಸಾದಿಯಾದಲ್ಲಿ ವಹ್ನಿಯಂತಿರಬೇಕು.
ಪ್ರಾಣಲಿಂಗಿಯಾದಲ್ಲಿ ಶುಕ್ತಿ ಕೊಂಡ ವಿಷದಂತಿರಬೇಕು.
ಶರಣನಾದಲ್ಲಿ ಉರಿಯುಂಡ ಕರ್ಪುರದಂತಿರಬೇಕು.
ಐಕ್ಯನಾದಲ್ಲಿ ಹಸುಳೆ ಕಂಡ ಕನಸಿನಂತಿರಬೇಕು.
ಹೀಂಗರಿದಡೆ ಆರರಲ್ಲಿ ಲೇಪ, ಮೂರರಲ್ಲಿ ಮುಕ್ತಿ.
ಇದ ಮೀರಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaktanādalli dharitriyantirabēku.
Māhēśvaranādalli appuvinantirabēku.
Prasādiyādalli vahniyantirabēku.
Prāṇaliṅgiyādalli śukti koṇḍa viṣadantirabēku.
Śaraṇanādalli uriyuṇḍa karpuradantirabēku.
Aikyanādalli hasuḷe kaṇḍa kanasinantirabēku.
Hīṅgaridaḍe āraralli lēpa, mūraralli mukti.
Ida mīralilla, niḥkaḷaṅka mallikārjunā.