ಭಕ್ತನಾದಲ್ಲಿ ಬ್ರಹ್ಮನ ಒಡಲೊಡೆಯಬೇಕು.
ಮಾಹೇಶ್ವರನಾದಲ್ಲಿ ವಿಷ್ಣುವಿನ ಚೇತನಕ್ಕೆ ಸಿಕ್ಕದಿರಬೇಕು.
ಪ್ರಸಾದಿಯಾದಿಯಲ್ಲಿ ರುದ್ರನ ಬಂಧಕ್ಕೆ ಹೊದ್ದದಿರಬೇಕು.
ಪ್ರಾಣಲಿಂಗಿಯಾದಲ್ಲಿ ಈಶ್ವರನ ಗೊತ್ತ ಮೆಟ್ಟದಿರಬೇಕು.
ಶರಣನಾದಲ್ಲಿ ಸದಾಶಿವಮೂರ್ತಿಯ ತಪ್ಪಲ ತಪ್ಪಿರಬೇಕು.
ಐಕ್ಯನಾದಲ್ಲಿ ಪರಶಿವನೆಂಬ ಪ್ರಮಾಣು ನಷ್ಟವಾಗಿರಬೇಕು.
ಇಂತೀ ಸ್ಥಲಂಗಳ ನೆಮ್ಮಿ ತೆಪ್ಪವ ಹತ್ತಿ ಒತ್ತುವನಂತೆ,
ತೆಪ್ಪವ ತಪ್ಪಲಿಗೆ ಸೇರಿದ ಮತ್ತೆ ಒತ್ತುವುದು ಹತ್ತುವುದು.
ಆ ಹೊಳೆ ಕಾಲಿಂಗೆ ಹೊಲಬಾರದ ಮತ್ತೆ ಪೂರ್ವವಿತ್ತ ಉತ್ತರವತ್ತ.
ಉಭಯನಷ್ಟವಾದುದೆತ್ತ,
ಅತ್ತಲೆ ತನ್ನಷ್ಟ ಮತ್ತೆ ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaktanādalli brahmana oḍaloḍeyabēku.
Māhēśvaranādalli viṣṇuvina cētanakke sikkadirabēku.
Prasādiyādiyalli rudrana bandhakke hoddadirabēku.
Prāṇaliṅgiyādalli īśvarana gotta meṭṭadirabēku.
Śaraṇanādalli sadāśivamūrtiya tappala tappirabēku.
Aikyanādalli paraśivanemba pramāṇu naṣṭavāgirabēku.
Intī sthalaṅgaḷa nem'mi teppava hatti ottuvanante,
teppava tappalige sērida matte ottuvudu hattuvudu.
Ā hoḷe kāliṅge holabārada matte pūrvavitta uttaravatta.
Ubhayanaṣṭavādudetta,
attale tannaṣṭa matte niḥkaḷaṅka mallikārjunā.