Index   ವಚನ - 571    Search  
 
ಭಕ್ತರ ಪಾವನವ ಮಾಡಿಹೆನೆಂದು ಮೊತ್ತವ ಕೂಡಿ, ಚಿತ್ತಕ್ಕೆ ಬಂದಂತೆ ಕಂಡುದ ಬೇಡಿ, ಭಕ್ತರ ಭವವ ತೊಳೆದೆಹೆನೆಂದು ನಿಶ್ಚಯಿಸಿಕೊಂಡಿಪ್ಪ ಅಚ್ಚುಗದವರ ಕಂಡು ಬೆಚ್ಚಿದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.