Index   ವಚನ - 570    Search  
 
ಭಕ್ತ ತಾ ಮಾಡುವ ಕಾಯಕ, ತನಗೆಂದಡೆ ಗುರುವಿಂಗೆ ದೂರ, ತನ್ನ ಸತಿಗೆಂದಡೆ ಲಿಂಗಕ್ಕೆ ದೂರ, ತನ್ನ ಸುತರಿಗೆಂದಡೆ ಜಂಗಮಕ್ಕೆ ದೂರ. ತನ್ನ ಬಂಧುಗಳಿಗೆಂದಡೆ ಸಂಗನಬಸವಣ್ಣ ಮೊದಲಾದ ಶರಣ ಸಂಕುಳಕ್ಕೆಲ್ಲಕ್ಕೂ ದೂರ. ನನಗೂ ದೂರ, ಎನ್ನೊಳಗಾದ ನಿಃಕಳಂಕ ಮಲ್ಲಿಕಾರ್ಜುನ ನಿನಗೂ ದೂರ.