ಭಕ್ತಿಸ್ಥಲ ಮಾಹೇಶ್ವರನ ನಿರ್ವೀಜ.
ಆ ನಿರ್ವೀಜ, ಪ್ರಸಾದಿಯ ಪ್ರಣಮ.
ಆ ಪ್ರಣಮ, ಪ್ರಾಣಲಿಂಗಿಯ ಎರಡಳಿದ ಅರಿವು.
ಆ ಅರಿವು, ಶರಣನ ಪರಿಪೂರ್ಣಕಳೆ.
ಆ ಕಳೆ, ನಿಃಪತಿಯಾದಲ್ಲಿ ಐಕ್ಯನ ನಿರವಯ.
ಆ ನಿರವಯ ವಸ್ತು ಬೇರೊಂದೇಕೆ, ಕುರುಹುಗೊಂಡೆ ?
ಅದು ನಿನ್ನದಲ್ಲ, ಎನ್ನ ಅಂಗಕ್ಕೋಸ್ಕರವಾಗಿ
ಲಿಂಗವಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.