Index   ವಚನ - 600    Search  
 
ಭೇರಿಯು ಈರಹವಾದಲ್ಲಿ ಅದಿರಲ್ಲದೆ ಸುನಾದವಿಲ್ಲ. ಪಾಷಾಣದ ಬೆಳಗು ಮೀರಿ[ದ]ಲ್ಲದೆ ರತ್ನವಲ್ಲ. ಇಂತೀ ವರ್ಮಭೇದವೆಂತುಟೆಂದಡೆ, ಭೇರಿಯಿದ್ದಲ್ಲದೆ ನಾದಕ್ಕೆ ಸಾಕಾರವಿಲ್ಲ. ಪಾಷಾಣವಿದ್ದಲ್ಲದೆ ದೀಪ್ತಿಗೆ ತೋರಲೊಡಲಿಲ್ಲ. ಕ್ರಿಯಾಶುದ್ಧಾತ್ಮನಾಗಿಯಲ್ಲದೆ, ವಿರಕ್ತಿಯನರಿವುದಕ್ಕೊಡಲಿಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.