Index   ವಚನ - 601    Search  
 
ಭೇರಿಯೊಳಗಣ ನಾದವ ಭೇದಿಸಬಲ್ಲಡೆ, ವಸ್ತುವ ಸಾಧಿಸಬಲ್ಲರೆಂಬೆ, ಅಭೇದ್ಯವ ಭೇದಿಸಬಲ್ಲರೆಂಬೆ. ಚೋದ್ಯದೊಳಗಳಣ ಸ್ವರೂಪವ ಸಾಗಿಸಿ ಬೋಧಿಸಬಲ್ಲಡೆ, ವಸ್ತುವ ಸಾಧಿಸಬಲ್ಲರೆಂಬೆ. ಇಂತಿವರಾಗುಹೋಗನರಿಯದೆ, ಜ್ಞಾನಕ್ಕೆ ನಾವೆ ಅರ್ಹರೆಂಬ ಕಾಳು ಮೂಳರ ನೋಡಿ, ಜಾಣನಾಗಿ ಅಡಗಿದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.