Index   ವಚನ - 638    Search  
 
ಮಾತ ಹೇಳುವ ಹಿರಿಯರೆಲ್ಲರೂ ನೀತಿಗೊಡಲಾದರು. ನಿರ್ಜಾತನ ಮರೆದು, ಭ್ರಾಂತಿಗೆ ಸಿಕ್ಕಿದ ಮತ್ತೆ ಇನ್ನೇತರ ಮಾತು? ಸೂತ್ರದ ಬೊಂಬೆಯ ನೂಕುವ ಪಾಶದಂತೆ, ಇವರೇತರ ಹಿರಿಯರು, ನಿಃಕಳಂಕ ಮಲ್ಲಿಕಾರ್ಜುನಾ.