Index   ವಚನ - 639    Search  
 
ಮಾತಿಗೆ ಮಾತನಾಡಿಹೆನೆಂದಡೆ ಪಥಕ್ಕೆ ಕಡೆ ಮೊದಲಿಲ್ಲ. ನಿರ್ಜಾತರನರಿವುದೆ ನಿತ್ಯ. ಮಿಕ್ಕಾದ ಶಾಸ್ತ್ರದ ಸಂತೆಯ ಮಾತು ಅದೇತಕ್ಕೆ ? ಭಾಸುರತೇಜನು ನಿರ್ಜಾತನು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.