ಮುನ್ನಿನ ಪರಿಯಂತುಟಲ್ಲ.
ಆದಡೆಂತಹುದು? ಆಗದಡೆಂತಾಯಿತ್ತು?
ಹಲವು ಪರಿ ಬಯಕೆ ತಾರ್ಕಣೆಯಾದಂತೆ
ಗುಹೇಶ್ವರಲಿಂಗ, ತನುವ ತನ್ನತ್ತಲೊಯ್ದನು.
Transliteration Munnina pariyantuṭalla.
Ādaḍentahudu? Āgadaḍentāyittu?
Halavu pari bayake tārkaṇeyādante
guhēśvaraliṅga, tanuva tannattaloydanu.
English Translation 2 This is not as before!
Had it been so, how could this be?
It's because it isn't, that this has come to pass!
My whole life's longing is fulfilled!
And therefore has the Guheśvaralinga
Drawn me to his heart!
Hindi Translation पहले की तरह मैं नहीं हूँ ।
वैसे हो तो इस तरह होता था? अब नहीं है।
कई तरह की चाह खोजने के बाद,
गुहेश्वर लिंग ने अपनी ओर खींच लिया।
Translated by: Eswara Sharma M and Govindarao B N
Tamil Translation வாழ்வு முன்பு இருந்த முறையில் இல்லை
தோன்றியிருக்குமோ? இல்லை எனவே பக்தி பொங்குகிறது
பலவிதமான ஆசைகளை ஆராய்ந்து அகற்றுகிறான்
குஹேசுவரலிங்கம் உடலைத் தன்னிடம் ஈர்த்துக் கொண்டனன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ತನುವ = ಸೂಕ್ಷ್ಮತನುವನ್ನು, ತನ್ನ ಶುದ್ದವಾದ ಮನಸ್ಸನ್ನು ; ತನ್ನತ್ತ ಒಯ್ದ = ತನ್ನತ್ತ ಸೆಳೆದುಕೊಂಡನು; ತಾರ್ಕಣೆಯಾಗು = ಶೋಧಿಸು, ಪರಿಶೋಧಿಸು; ಪರಿ = ಬಾಳಿನ ರೀತಿ; ಪರಿಯಂತುಟಲ್ಲ = ಆ ಪರಿಯಂತೆ ಇಂದಿನ ಬದುಕು ಅಲ್ಲ; ಮುನ್ನಿನ = ಗುರುಪಥ, ಶಿವಪಥಕ್ಕೆ ಬರುವುದಕ್ಕೆ ಮುಂಚಿನ;
Written by: Sri Siddeswara Swamiji, Vijayapura