Index   ವಚನ - 660    Search  
 
ಮೃತ್ಪಿಂಡದ ಹದನ ಚಕ್ರಿಯ ಚಿತ್ತದ ಕರದಂತೆ, ಚಿತ್ರಜ್ಞನ ಚಿತ್ರದ ಲೆಕ್ಕಣಿಕೆಯ ಒಪ್ಪದಂತೆ. ಇಂತೀ ಆತ್ಮನ ದೃಷ್ಟ, ತನ್ನ ಇಷ್ಟದ ಲಕ್ಷದಲ್ಲಿ. ಇಂತೀ ಉಭಯದ ದೃಷ್ಟವಿದ್ದಂತೆ, ಚಿತ್ತ ಅಚ್ಚೊತ್ತಿರಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ.