Index   ವಚನ - 666    Search  
 
ರಾಜರಲ್ಲಿ ಹೊಕ್ಕ ಮತ್ತೆ, ಅವರ ಆಗುಚೇಗೆಯ ಹೇಳಬೇಕು. ಬೇಗೆಯ ಅಳರಿನಲ್ಲಿ ಹೊಕ್ಕ ಮತ್ತೆ, ಸೂಡಿಗೆ ಅಂಜಲೇಕೆ? ಸುಖವ ಮೆಚ್ಚಿ ಅಖಿಳರೊಡನೆ ಬೆರಸಿದ ಮತ್ತೆ, ಅಕಳಂಕತನವುಂಟೆ ? ಇಂತೀ ಬಕಧ್ಯಾನಿಗಳ ಧ್ಯಾನ, ಮಕರದ ಒಲುಮೆಯಂತೆ, ನಿಃಕಳಂಕ ಮಲ್ಲಿಕಾರ್ಜುನಾ.