Index   ವಚನ - 674    Search  
 
ಲಿಂಗಕ್ಕೆ ಮಜ್ಜನವ ಮಾಡುವಲ್ಲಿ ಮಂಡೆಯ ಕುರುಹ ಕಾಣೆ. ಲಿಂಗಕ್ಕುಣಬಡಿಸುವಡೆ ಬಾಯ ನೆಪ್ಪ ಕಾಣೆ. ಇದಕ್ಕಿನ್ನೇವೆ ? ಇನ್ನಾರಿಗೆ ಹೇಳುವೆ ? ಕೊಟ್ಟ ಗುರು, ದೃಷ್ಟವ ಹೇಳಿದುದಿಲ್ಲ. ಸೊಡರ ಹಿಡಿದು ಹಾಳುಹಗಹದಲ್ಲಿ ಬೀಳುವ ತೆರನೆನಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.