ಲಿಂಗಕ್ಕೊಂದು, ತನಗೊಂದೆಂಬಾಗ ಆ ಅಂಗ, ಲಿಂಗವಿರೋಧಿಯೆ ?
ಆ ಅಂಗ, ಇಷ್ಟಲಿಂಗವ ಆತ್ಮನ ನೆಲೆಯಲ್ಲಿ, ಅರಿದೆಹೆನೆಂಬುದು ನಿರ್ಮಾಲ್ಯವೆ ?
ಇವು ಕುಲಛಲ ವಾಗ್ವಾದದ ಮಾತಲ್ಲದೆ, ಬಲಿಕೆವಂತರ ನೀತಿಯಲ್ಲ.
ಕೊಂಬಲ್ಲಿ ಕೊಡುವಲ್ಲಿ, ಉಂಬಲ್ಲಿ ಉಡುವಲ್ಲಿ, ಓಡುವಲ್ಲಿ,
ಲಿಂಗವನೊಡಗೂಡಿರ್ಪುದು, ಕ್ರಿಯಾಶುದ್ಧಾತ್ಮನ ಇರವು.
ಹೀಂಗಲ್ಲದೆ ಪತ್ರಚಿತ್ರದಲ್ಲಿ ಎತ್ತಿ ನೋಡಿದಡೆ,
ಸೂರ್ಯ ತತ್ತುಗೊತ್ತಾಗಿರ್ಪುದು, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Liṅgakkondu, tanagondembāga ā aṅga, liṅgavirōdhiye?
Ā aṅga, iṣṭaliṅgava ātmana neleyalli, aridehenembudu nirmālyave?
Ivu kulachala vāgvādada mātallade, balikevantara nītiyalla.
Komballi koḍuvalli, umballi uḍuvalli, ōḍuvalli,
liṅgavanoḍagūḍirpudu, kriyāśud'dhātmana iravu.
Hīṅgallade patracitradalli etti nōḍidaḍe,
sūrya tattugottāgirpudu, niḥkaḷaṅka mallikārjunā.