Index   ವಚನ - 680    Search  
 
ಲಿಂಗವ ಕೈಯಲ್ಲಿ ಹಿಡಿದು, ಭಕ್ತರಂಗಣವ ಕಾಯಲೇತಕ್ಕೋ ? ಲಿಂಗವ ಕೈಯಲ್ಲಿ ಹಿಡಿದು, ಅವರಂಗದಿಚ್ಫೆಯ ನುಡಿದು, ತನ್ನ ದಿಂಡ ಹೊರೆಯಲೇತಕ್ಕೋ ? ಸಂದನಳಿದ ಸದಮಲಾನಂದಂಗೆ ಇದರಿಂದ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.