Index   ವಚನ - 681    Search  
 
ಲಿಂಗವನರಿದನಾಗಿ ಗುರುವೆಂಬುದ ಬಲ್ಲ. ಪ್ರಸಾದವನರಿದನಾಗಿ ಜಂಗಮವೆಂಬುದ ಬಲ್ಲ. ಪ್ರಸನ್ನವನರಿದನಾಗಿ ಪಾದೋದಕವೆಂಬುದ ಬಲ್ಲ. ಪಾದೋದಕವೆಂಬುದ ಬಲ್ಲನಾಗಿ, ಬ್ರಹ್ಮನ ಬಲೆಗೆ ಸಿಲುಕ, ವಿಷ್ಣುವಿನ ನೇಣಿನಲ್ಲಿ ಕಟ್ಟುವೊಡೆಯ, ರುದ್ರನ ಶೂಲದಲ್ಲಿ ಬಗೆಯಿಸಿಕೊಳ್ಳ. ಇಂತೀ ಅಗ್ಗಳೆಯಂಗೆ, ಜಗದ ನುಗ್ಗುಗಳು ಸರಿಯೆಂದಡೆ, ಸಿಗ್ಗಾಗದಿರ್ಪನೆ ? ಚಿದ್ರೂಪನ ನಿಲವಿಂಗೆ ಹೊದ್ದಿ, ನಮೋ ನಮೋ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.