ಲಿಂಗಸ್ವರೂಪದಲ್ಲಿ ನಿಜವಸ್ತುವಿನ ಕಳೆಯದೆ, ಮತ್ತಿಲ್ಲದುದ ಕಂಡೆ.
ರುದ್ರನ ವೇಷದಲ್ಲಿ ಪರಮನ ಪರಮ ವಿರಕ್ತಿಯದೆ, ಮತ್ತಿಲ್ಲಾ ಎಂದೆ.
ಉಂಟಾದುದು ಇಲ್ಲವಾಗಿ, ಇಲ್ಲವಾದುದು ಉಂಟಾಗಿ,
ಈ ಉಭಯದ ಬೆಡಗಿನ ಬಿನ್ನಾಣವ,
ಒಲವರದಿಂದಲ್ಲದೆ ತಿಳಿಯಬಾರದು,
ನಿಃಕಳಂಕ ಮಲ್ಲಿಕಾರ್ಜುನಲಿಂಗವ.
Art
Manuscript
Music
Courtesy:
Transliteration
Liṅgasvarūpadalli nijavastuvina kaḷeyade, mattilladuda kaṇḍe.
Rudrana vēṣadalli paramana parama viraktiyade, mattillā ende.
Uṇṭādudu illavāgi, illavādudu uṇṭāgi,
ī ubhayada beḍagina binnāṇava,
olavaradindallade tiḷiyabāradu,
niḥkaḷaṅka mallikārjunaliṅgava.