Index   ವಚನ - 693    Search  
 
ವಸ್ತುವ ಕುರಿತು ಇಷ್ಟವ ನೋಡಬೇಕಲ್ಲದೆ, ಇಷ್ಟವ ಕುರಿತು ವಸ್ತುವ ನೋಡಬಹುದೆ ? ಹಿಡಿತೆಯ ಹಿಡಿದು ಇರಿಯಬೇಕಲ್ಲದೆ, ಮೊನೆಯ ಹಿಡಿದು ಇರಿದವರುಂಟೆ ? ನೆನಹ ರೂಪಿನಲ್ಲಿ ಅನುಕರಿಸಬಹುದಲ್ಲದೆ, ರೂಪ ನೆನಹಿನಲ್ಲಿ ಅನುಕರಿಸಬಹುದೆ ? ತಿಟ್ಟವ ಲಕ್ಷಿಸುವುದು ಲೆಕ್ಕಣಿಕೆಯಿಲ್ಲದೆ, ಆ ತಿಟ್ಟ ಲೆಕ್ಕಣಿಕೆಯ ಲಕ್ಷಿಸಬಹುದೆ ? ಇಂತೀ ದ್ವಂದ್ವವನರಿದು, ಉಭಯದ ಸಂದಿನ ಬೆಸುಗೆ ಒಂದೆಂದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.