Index   ವಚನ - 708    Search  
 
ವೇದವ ಕಲಿತು, ಶಾಸ್ತ್ರವನೋದಿ, ನಾನಾ ಪುರಾಣಂಗಳಲ್ಲಿ ಪರಿಣತೆಯಾದೆವೆಂದು ಶ್ರುತಿ ಸ್ಮೃತಿಗಳಲ್ಲಿ ಪರತತ್ವವ ನೋಡಿ ಕಂಡೆಹೆವೆಂದು ಹೇಳುತ್ತಿರ್ಪ ಹಿರಿಯರೆಲ್ಲರೂ ಇಕ್ಕುವ ದಾತನ ಬಾಗಿಲ ಕಾಯ್ದು, ಚಿಕ್ಕಮಕ್ಕಳಾದರು. ದೃಷ್ಟವ ಬೋಧಿಸುವ ಹಿರಿಯರೆಲ್ಲರೂ ಕೆಟ್ಟರಲ್ಲಾ, ಉತ್ತರದ ಬಲೆಗೆ ಸಿಕ್ಕಿದ ಮೂಷಕನಂತೆ. ಇವರ ದೃಷ್ಟವ ಕಂಡು ಮತ್ತೆ ಹಿರಿಯರೆಂದು ಹೋರುತ್ತಿರ್ಪ ಮಿಟ್ಟೆಯ ಭಂಡರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.