Index   ವಚನ - 727    Search  
 
ಸತ್ತ ಹೆಣಕ್ಕೆ ಎಳವಿಗೆ ಬಂದವರ ಕಂಡೆ. ದೃಷ್ಟಿ ತೆಗೆಯಿತ್ತು ಹೆಣ. ದೃಷ್ಟಿ ತೆಗೆಯಲಾಗಿ, ಬಾಯಿಗಿಕ್ಕಿದ ಅಕ್ಕಿ ಒಕ್ಕವು, ಮಂದಲಿಗೆಯಲ್ಲಿ ಮಂದಲಿಗೆಯಾನಲಾರದೆ ಹಿಂಗಿ ಒಕ್ಕವು ನೆಲಕ್ಕೆ. ನೆಲದೊಳಗೆ ಅಟ್ಟ ಹೆಣದ ಬಾಯಕ್ಕಿ, ಓಗರವಿಲ್ಲದೆ ಉಂಡು, ಸಲೆ ಜೀರ್ಣಿಸಿದ ಮತ್ತೆ, ಕಾಯದ ಜೀವದ ಹೊಲಿಗೆಯನರಿದವಂಗಲ್ಲದೆ ಲಿಂಗೈಕ್ಯವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.