ಸಡಗರಿಸುವಲ್ಲಿ ಲಿಂಗವ ನೆನೆದು, ಕಡುದುಃಖ ಬಂದಲ್ಲಿ ಲಿಂಗವ ಮರೆದು,
ಇಂತೀ ಅಂಗಲಿಂಗಸಂಗವ ಮಾಡುವ ಪರಿಯಿನ್ನೆಂತೊ?
ಕೂರ್ತಡೆ ಭಕ್ತ, ತಾಪತ್ರಯಕ್ಕೆ ಪಾಪಿಯೆ?
ಇಂತೀ ಸುಖದುಃಖವೆಂಬ ಉಭಯವ ಭೇದಿಸಿ ನಿಂದವಂಗೆ,
ಸುಖನಿಶ್ಚಯದಿಂದ ನಮೋ ನಮೋ ಎಂಬೆ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Saḍagarisuvalli liṅgava nenedu, kaḍuduḥkha bandalli liṅgava maredu,
intī aṅgaliṅgasaṅgava māḍuva pariyinnento?
Kūrtaḍe bhakta, tāpatrayakke pāpiye?
Intī sukhaduḥkhavemba ubhayava bhēdisi nindavaṅge,
sukhaniścayadinda namō namō embe,
niḥkaḷaṅka mallikārjunā.