ಸರ್ವೆಂದ್ರಿಯಂಗಳ ಲಿಂಗಮುಖ ಮಾಡಿ, ಲಿಂಗಕ್ಕೆ ಕೊಡಬೇಕೆಂಬುದು,
ತನ್ನಯ ಸಂದೇಹವೋ, ಲಿಂಗದ ಬಂಧವೋ ಎಂಬುದನರಿತು ಕೊಡುವಲ್ಲಿ,
ಇಂದ್ರಿಯಂಗಳ ನೆನಹಿನಲ್ಲಿ ಲಿಂಗ ಬರಬೇಕೊ?
ಲಿಂಗದ ನೆನಹಿನಲ್ಲಿ ಇಂದ್ರಿಯಂಗಳು ಎಯ್ದಬೇಕೊ?
ಇಂತೀ ಉಭಯದ ಪ್ರಮಾಣು, ಸಂದೇಹದ ಅಪ್ರಮಾಣು.
ಈ ಅರ್ಪಿತದಂಗ ಸಂಗವಾದಲ್ಲಿ,
ತಿಲ ಎಣ್ಣೆಯಂತೆ, ಗಂಧ ಕುಸುಮದಂತೆ,
ಲಿಂಗ ಇಂದ್ರಿಯಂಗಳ ಸಂದು ಒಂದೊಂದು ಕೂಡುವಲ್ಲಿ,
ಎನ್ನಂಗದ ಮನದ ಕೊನೆಯ ಮೊನೆಯ ಮೇಲೆ
ನೀ ಬಂದು ನಿಂದಡೆ, ಬಿಡುಗು ಸಂದೇಹ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sarvendriyaṅgaḷa liṅgamukha māḍi, liṅgakke koḍabēkembudu,
tannaya sandēhavō, liṅgada bandhavō embudanaritu koḍuvalli,
indriyaṅgaḷa nenahinalli liṅga barabēko?
Liṅgada nenahinalli indriyaṅgaḷu eydabēko?
Intī ubhayada pramāṇu, sandēhada apramāṇu.
Ī arpitadaṅga saṅgavādalli,
tila eṇṇeyante, gandha kusumadante,
liṅga indriyaṅgaḷa sandu ondondu kūḍuvalli,
ennaṅgada manada koneya moneya mēle
nī bandu nindaḍe, biḍugu sandēha,
niḥkaḷaṅka mallikārjunā.