ಸುಗಂಧ ಕೊಡುವ ಮೃಗವೆಂದಡೆ,
ನೋಯಿಸಿ ಬಂಧಿಸಿದಡೆ ಗಂಧ ಬಂದುದುಂಟೆ ದುರ್ಗಂಧವಲ್ಲದೆ?
ಇಂತೀ ಅರಿವಿನ ತೆರದಲ್ಲಿ ನುಡಿವ, ಮಾತಿನ ಬ್ರಹ್ಮವ ಬಲ್ಲೆವೆಂದು,
ಒತ್ತಿ ನುಡಿಯಬಹುದೆ, ಸಾತ್ವಿಕ ಸದಾತ್ಮರ?
ಅವರಿಚ್ಫೆಯೊಳಿರ್ದು ಸುಚಿತ್ತವನರಿವುದು.
ಭೃತ್ಯತ್ವದಿಂದ ತನಗೆ ಸಿಕ್ಕಿಚ್ಫೆಯ ಕಾಣಿಸಿಕೊಳಬೇಕಲ್ಲದೆ,
ತಾ ಕಷ್ಟನಾಗಿ ಆ ಮಹಾತ್ಮರ ದೃಷ್ಟವ ನೋಡಿಹೆನೆಂದಡೆ,
ಸ್ವಪ್ನದಲ್ಲಿಯೂ ತಲೆದೋರನಾಗಿ.
ಇಂತೀ ನಿಶ್ಚಯದ ವಸ್ತುವನರಿತು,
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ ಬೆಚ್ಚಂತಿರಬೇಕು.
Art
Manuscript
Music
Courtesy:
Transliteration
Sugandha koḍuva mr̥gavendaḍe,
nōyisi bandhisidaḍe gandha banduduṇṭe durgandhavallade?
Intī arivina teradalli nuḍiva, mātina brahmava ballevendu,
otti nuḍiyabahude, sātvika sadātmara?
Avaricpheyoḷirdu sucittavanarivudu.
Bhr̥tyatvadinda tanage sikkicpheya kāṇisikoḷabēkallade,
tā kaṣṭanāgi ā mahātmara dr̥ṣṭava nōḍ'̔ihenendaḍe,
svapnadalliyū taledōranāgi.
Intī niścayada vastuvanaritu,
niḥkaḷaṅka mallikārjunaliṅgadalli beccantirabēku.