ಸುಡುವ ಬೆಂಕಿಯ ತುದಿಮೊನೆಯಲ್ಲಿ, ಒಂದು ಅರಗಿನ ಮಣಿಮಾಡವಿದೆ
ಮನೆಯಲ್ಲಿ ಬೂರದ ಹಾಸು ಹಾಕಿ,
ನೀರಿನ ಮಂಚದ ಮೇಲೆ ನಾರಿಯರೆಲ್ಲರೂ
ತಮ್ಮ ಕ್ರೀಡಾಭಾವಂಗಳಿಂದ ಮಲಗಿರಲಾಗಿ,
ಅರಗಿನ ಮಾಡ ಎದ್ದುರಿದು, ನೀರ ಮಂಚವ ಸುಟ್ಟು,
ಬೂರದ ಹಾಸು ಹೊತ್ತಿ, ನಾರಿಯರುರಿದು ಹೋಗಿ,
ಉರಿವ ನಾಲಗೆ ಹರಿವ ನೀರ ಕೆಡಿಸಿತ್ತು.
ಆ ಹರವರಿಯಲ್ಲಿ ಪರಿಹರಿಸಬಲ್ಲಡೆ, ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Suḍuva beṅkiya tudimoneyalli, ondu aragina maṇimāḍavide
maneyalli būrada hāsu hāki,
nīrina man̄cada mēle nāriyarellarū
tam'ma krīḍābhāvaṅgaḷinda malagiralāgi,
aragina māḍa edduridu, nīra man̄cava suṭṭu,
būrada hāsu hotti, nāriyaruridu hōgi,
uriva nālage hariva nīra keḍisittu.
Ā haravariyalli pariharisaballaḍe, aikyānubhāva,
niḥkaḷaṅka mallikārjunā.