ಹೆಣ್ಣು ಬೇಡುವಂಗೆ ಹೆಣ್ಣೇ ಪ್ರಾಣ,
ಹೊನ್ನ ಬೇಡುವಂಗೆ ಹೊನ್ನೇ ಪ್ರಾಣ.
ಮಣ್ಣ ಬೇಡುವಂಗೆ ಮಣ್ಣೇ ಪ್ರಾಣ.
ಮನದ ಕುರುಹನರಿದವರನಾರನೂ ಕಾಣೆ.
ಕುರಿತು ಬಂದಲ್ಲಿ ಕುರುಹಿಂಗೆ ಮಾಡುವುದೇ ಶಾಂತಿಗುಣ.
ಅರಿಕೆವಿದರು ಬಂದಲ್ಲಿ, ತನು ಮನ ಧನ ತೆರಹಿಲ್ಲದೆ ಲೇಪವಾಗಿರ್ಪುದೆ,
ಅರಿದ ಸದ್ಭಕ್ತನ ಇರವು.
ಲಾಂಛನಕ್ಕೆ ನಮಿಸಿ, ಆಪ್ಯಾಯನಕ್ಕೆ ನೀಡಿ,
ತಾ ತಪ್ಪಿಪ್ಪ ಭಕ್ತನ ಒಪ್ಪಕ್ಕೆ ನಮೋ ನಮೋ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Heṇṇu bēḍuvaṅge heṇṇē prāṇa,
honna bēḍuvaṅge honnē prāṇa.
Maṇṇa bēḍuvaṅge maṇṇē prāṇa.
Manada kuruhanaridavaranāranū kāṇe.
Kuritu bandalli kuruhiṅge māḍuvudē śāntiguṇa.
Arikevidaru bandalli, tanu mana dhana terahillade lēpavāgirpude,
arida sadbhaktana iravu.
Lān̄chanakke namisi, āpyāyanakke nīḍi,
tā tappippa bhaktana oppakke namō namō,
niḥkaḷaṅka mallikārjunā.