Index   ವಚನ - 801    Search  
 
ಹೆಣ್ಣು ಹೊರಗಣದೆಂದು, ಹೊನ್ನು ಹೊರಗಣದೆಂದು, ಮಣ್ಣು ಹೊರಗಣದೆಂದು ಸುಬೋಧೆಯ ಇದಿರಿಗೆ ಹೇಳಿ, ದುರ್ಬೋಧೆಯಲ್ಲಿ ತಾವು ನಡೆವುತ್ತಿಹ ದುರ್ಗುಣಿಗಳ ಕಂಡು, ನಾಚಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.