ಹೊಲನ ಗೆಯ್ದು ಮನೆಗೆ ಬರಲಾಗಿ,
ನಿಲಿಕಿ ನೋಡಿ ಕಂಡೆನು, ಮನೆಯೊಡತಿಯ.
ಎನ್ನ ಕಂಡು ಹಿಡಿದಿರ್ದೊನಕೆಯ ಮಡಗಿ,
ಅಡಬೇಕೆಂದು ಹೋಗಿ, ಅಡುವ ಗಡಿಗೆಯ ಕಾಣದೆ,
ತಡವಡಿಸಿ ನೋಡುತ್ತಿರ್ದಳಯ್ಯಾ, ಎನ್ನ ಕಂಡು ಕಡುಗಲಿಗಂಜಿ.
ಒರಳೊಳಗೆ ಅಕ್ಕಿಯಿಲ್ಲ, ಮಾಡುವುದಕ್ಕೆ ಮೊರನಿಲ್ಲ, ತೊಳೆವುದಕ್ಕೆ ನೀರಿಲ್ಲ.
ಇಂತಿವಳ ಮನೆವಾರ್ತೆಯ ಕಂಡು, ಒಗೆತನಗೆಟ್ಟು, ಬದುಕಬೇಡಾ ಎಂದೆ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Holana geydu manege baralāgi,
niliki nōḍi kaṇḍenu, maneyoḍatiya.
Enna kaṇḍu hiḍidirdonakeya maḍagi,
aḍabēkendu hōgi, aḍuva gaḍigeya kāṇade,
taḍavaḍisi nōḍuttirdaḷayyā, enna kaṇḍu kaḍugaligan̄ji.
Oraḷoḷage akkiyilla, māḍuvudakke moranilla, toḷevudakke nīrilla.
Intivaḷa manevārteya kaṇḍu, ogetanageṭṭu, badukabēḍā ende,
niḥkaḷaṅka mallikārjunā.