ಮೂರು ಹೊನ್ನು ಕೊಟ್ಟು
ಐದುಮಾರು ಭೂಮಿಯ ಕೊಂಡೆ.
ಆ ಭೂಮಿಯಲ್ಲಿ ಆರು ವರ್ಣದ ಬೀಜವ ಬಿತ್ತಿ
ನೀರಿಲ್ಲದೆ ಫಲ ಒಡ್ಡಿದೆ.
ಬೆಳೆಯಿಲ್ಲದೆ ಕೊಯ್ದ ರಾಸಿಯ ಒಕ್ಕಿದೆ.
ಎರಡರಲ್ಲಿ ಅಳದರೆ
3-6-9-18-36-216-1052 ಕೊಳಗವಾಯಿತ್ತು.
ಮರಳಿ ಒಂದರಲ್ಲಿ ಅಳದರೆ ಒಮ್ಮನವಾಯಿತ್ತು.
ಆ ಒಮ್ಮನವ ಸರಕಾರಕ್ಕೆ ಕೊಟ್ಟು ಸುಮ್ಮನೆ ಇದ್ದನಯ್ಯಾ
ನಿಮ್ಮ ಶರಣ ಬಡವನಾಗಿ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.