Index   ವಚನ - 39    Search  
 
ಹೊನ್ನು ತೆತ್ತಲ್ಲದೆ ಹೊಲ ಮಾಡಬಾರದು. ಬಿಟ್ಟಿ ಬೇಗಾರವಿಲ್ಲದೆ ಊರೊಳಗಿರಬಾರದು. ಸರಕಾರಕ್ಕೆ ರುಜು ಇಲ್ಲದೆ ರೈತನಾಗಬಾರದು. ಅದೆಂತೆಂದೊಡೆ: ಇಷ್ಟುಳ್ಳಾತನೇ ಪಾಚ್ಫಾರೈತ; ಇಲ್ಲದಾತ ದುಬ್ಬುಳಕ ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.