Index   ವಚನ - 102    Search  
 
ಪಂಚವರ್ಣದ ನಗರದಲ್ಲಿ, ಕಾಲು ತಲೆಗಳಿಲ್ಲದ ದೊರೆಗಳು. ಕಣ್ಣು ಕೈಗಳಿಲ್ಲದ ಕಾರಭಾರಿಗಳು. ಗೌಡ, ಶ್ಯಾನಭೋಗರಿಂದುತ್ಪತ್ಯ, ಪರಿಚಾರಕರಿಂದ ಬಂಧನ. ಇಂತಿವರೆಲ್ಲರಿಗೆ ಒಡತಿ ಮೂರುಮುಖದ ಕುಂಪಣಿ. ಪರದೇಶಕ್ಕೈದಬೇಕಾದರೆ ಪಂಚವರ್ಣದ ಸಂಚಾರವ ಕೆಡಿಸಿ, ಕಾಲು, ತಲೆ ದೊರೆಗೆ ಬಂದಲ್ಲದೆ, ಕಣ್ಣು, ಕೈ ಕಾರಭಾರಿಗೆ ಬಂದಲ್ಲದೆ, ಗೌಡ, ಶ್ಯಾನಭೋಗ, ಪರಿಚಾರಕರ ಕೊಂದಲ್ಲದೆ, ಮೂರುಮುಖದ ಕುಂಪಣಿಯ ತಲೆಹೊಡೆದಲ್ಲದೆ ಮುನ್ನಿನ ಬಟ್ಟೆಯನರಿಯಬಾರದು. ಅರಿಯದಕಾರಣ ಅಸುಲಿಂಗಸಂಬಂಶಧಿಗಳಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.