ಶರಣರು ಶರಣರು ಎಂದು ಹೆಸರಿಟ್ಟುಕೊಂಬಿರಿ,
ಶರಣರ ಪರಿ ಯಾರು ಬಲ್ಲರಯ್ಯಾ ಎಂದಡೆ :
ಕಾಲಿಲ್ಲದ ಹೆಳವ, ಕೈಯಿಲ್ಲದ ಮೋಟ,
ಕಣ್ಣಿಲ್ಲದ ಕುರುಡ, ತಲೆಯಿಲ್ಲದ ಮಂಡೂಕ,
ಈ ನಾಲ್ವರು ಬಲ್ಲರಲ್ಲದೆ,
ಉಳಿದ ಭವಭಾರಿಗಳೆತ್ತ ಬಲ್ಲರಯ್ಯಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Śaraṇaru śaraṇaru endu hesariṭṭukombiri,
śaraṇara pari yāru ballarayyā endaḍe:
Kālillada heḷava, kaiyillada mōṭa,
kaṇṇillada kuruḍa, taleyillada maṇḍūka,
ī nālvaru ballarallade,
uḷida bhavabhārigaḷetta ballarayyā,
kāḍanoḷagāda śaṅkarapriya cannakadambaliṅga
nirmāyaprabhuve.