Index   ವಚನ - 284    Search  
 
ತ್ರಿಪುರಮಧ್ಯದಲ್ಲಿ ಮೂರಾರು ಮಂಡಲ ಇರ್ಪುದ ಕಂಡೆ. ಮಂಡಲದ ಮಧ್ಯದಲ್ಲಿ ಅಗ್ನಿಪರ್ವತವ ಕಂಡೆ. ಪರ್ವತಾಗ್ರದಲ್ಲಿ ಸಾವಿರಕಂಬದ ಮಂಟಪವ ಕಂಡೆ. ಮಂಟಪದ ಮಧ್ಯದಲ್ಲಿ ಬಿಳಿಯತಾವರೆಯ ಕಮಲವ ಕಂಡೆ. ಕಮಲದಲ್ಲಿ ಅಗಣಿತಕೋಟಿ ರವಿಶಶಿಕಳೆಯ ನುಂಗಿದ ನವರತ್ನದ ತಗಡವ ಕಂಡೆ. ಕಂಡವರು ಹಿಂಗಿ ಕಾಣದವರು ಬಂದು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.