ವಚನ - 868     
 
ಆಚಾರವೆ ಸ್ವರೂಪವಾದ ಕುರುಹಿನ ಅಂಗವಿಡಿದು ಅಂಗ ಅನಂಗವೆಂಬವೆರಡೂ ಹೊದ್ದದ ಮಹಿಮ ನೀನು ನೋಡಾ, ಚೆನ್ನಬಸವಣ್ಣಾ! ಅಂಗವೆ ಆಚಾರವಾಗಿ ಇರುಬಲ್ಲೆ ಆಚಾರವೆ ಅಂಗವಾಗಿ ಇರಬಲ್ಲೆಯಾಗಿ ಅಂಗವಿಲ್ಲದ ಅಪ್ರತಿಮನು ನೀನು ನೋಡಾ. ಆಚಾರವೆ ಆಯತ, ಆಚಾರವೆ ಸ್ವಾಯತ ಆಚಾರವೆ ಸನ್ನಿಹಿತ ಆಚಾರವೆ ಪ್ರಾಣವಾಗಿಪ್ಪೆಯಾಗಿ ಎನ್ನ ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರ ಭಿಕ್ಷವನಿಕ್ಕು ಚೆನ್ನಬಸವಣ್ಣಾ.