ಮುಂದು ಜಾವದಲೆದ್ದು,
ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತ ಸಮಯದಲ್ಲಿ
ಶಿವಭಕ್ತರ ಮುಖವ ನೋಡುವುದು.
ಹುಟ್ಟಿದುದಕ್ಕೆ ಇದೇ ಸಫಲ ನೋಡಾ,
ಸತ್ಯವಚನವಿಂತೆಂದುದು,
ಇವಿಲ್ಲದವರ ನಾನೊಲ್ಲೆ ಕಾಣಾ ಗುಹೇಶ್ವರಾ.
Transliteration Mundu jāvadaleddu,
liṅgadaṅghriya muṭṭi,
suprabhāta samayadalli
śivabhaktara mukhava nōḍuvudu.
Huṭṭidudakke idē saphala nōḍā,
satyavacanavintendudu,
ivilladavara nānolle kāṇā guhēśvarā.
English Translation 2 To supplicate the Linga
In the early hours;
To greet the saints of Siva
At early dawn—
This is the worth of life!
Thus says the Scriptural word.
I reck not for those
Who honour it in the breach,
O Guheśvara.
Hindi Translation प्रात:काल उठकर लिंग पाद छूकर,
सुप्रभात के समय में सद्भक्तों का मुख दर्शन करना ।
जन्म लेने की यही सफलता देखो; सत्यवचन इस तरह है
इसके बिना वे नहीं तो मैं नहीं मानता गुहेश्वरा ।
Translated by: Eswara Sharma M and Govindarao B N
Tamil Translation விடியலில் எழுந்து, இஷ்டலிங்கத்தைத் தொட்டு
சூரியோதய வேளையில் பக்தனின் முகத்தைக் காண்பாய்.
பிறவிப்பயன் இதுவன்றோ, உண்மையை உணர்ந்தோரின் சொல்லன்றோ
இத்தகு பக்தியற்றோரை நான் ஏலேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇದೆ = ಭಕ್ತಿಯ ಆಚರಣೆ, ಭಕ್ತನ ದಿನಚರಿ.; ಒಂದು ಜಾವ = ಸುಮಾರು ಮೂರು ತಾಸುಗಳು; ಸತ್ಯವಚನ = ಸತ್ಯವನ್ನು ಅರಿತವರ ವಚನ; ಸುಪ್ರಭಾತ ಸಮಯ = ಉಷೆ ಮತ್ತು ಅರುಣೋದಯದ ಸಮಯ, ಸೂರ್ಯನುದಿಸುವ ಪವಿತ್ರ ಕ್ಷಣ;
Written by: Sri Siddeswara Swamiji, Vijayapura