Index   ವಚನ - 30    Search  
 
ಸಹಜ ಶಿವಭಕ್ತರಾದವರು ತಟ್ಟೆ ಬಟ್ಟಲೊಳಗುಂಡದ್ದು ಇಷ್ಟಲಿಂಗದ ಪ್ರಸಾದ. ಕರಕಮಲದೊಳಗುಂಡದ್ದು ಪ್ರಾಣಲಿಂಗದ ಪ್ರಸಾದ. ಪಾವಡ ಪರ್ಣದೊಳಗುಂಡದ್ದು ಭಾವಲಿಂಗದ ಪ್ರಸಾದ. ಲಿಂಗದಲ್ಲಿ ಮನ ನೋಟ ನಿಲಿಸಿಕೊಂಬುವುದು ಲಿಂಗಪ್ರಸಾದ. ಲಿಂಗದಲ್ಲಿ ಮನ ನೋಟವಿಲ್ಲದೆ ಕೊಂಬುದು ಅನರ್ಪಿತವು. ಅದು ಕಾರಣ, ಲಿಂಗ ನೆನಹಿನಿಂದಲೆ ಸ್ವೀಕರಿಸುವುದು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ