ಆ ಮಹಾಲಿಂಗವೆ ಚಿನ್ನಾದಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪರನಾದಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪ್ರಣಮನಾದಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಮಹಾನಾದಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಚಿದ್ಬಿಂದುಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪರಬಿಂದುಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪ್ರಣಮಬಿಂದುಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಮಹಾಬಿಂದುಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಚಿತ್ಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪರಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪ್ರಣಮಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪೂರ್ಣಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಮಹಾಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಗೋಳಕಾಕಾರಪ್ರಣಮಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಅಖಂಡಗೋಳಕಾಕಾರ
ಪ್ರಣಮಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಅಖಂಡ ಮಹಾಗೋಳಕಾಕಾರ
ಪ್ರಣಮಮೂರ್ತಿ ನೋಡಯ್ಯ.
ಆ ಮಹಾಲಿಂಗದ ಮಹಿಮೆ ಗಣಿತಕ್ಕಗಣಿತ ನೋಡ!
ಆ ಚಿದ್ಘನಮಹಾಲಿಂಗವೆ ಮಂತ್ರಮೂರ್ತಿ ನೋಡ,
ಸಂಗನಬಸವೇಶ್ವರ