•  
  •  
  •  
  •  
Index   ವಚನ - 893    Search  
 
ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ. ಆದಿಯಲ್ಲಿ ನೀನೆ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮ. ಆದಿಯಲ್ಲಿ ನೀನೆ ಜಂಗಮವಾದ ಕಾರಣ ನಿನ್ನಿಂದ ಹುಟ್ಟಿತ್ತು ಪ್ರಸಾದ. ಆದಿಯಲ್ಲಿ ನೀನೆ ಪ್ರಸಾದಿಯಾದ ಕಾರಣ ನಿನ್ನಿಂದ ಹುಟ್ಟಿತ್ತು ಪಾದೋದಕ. ಇಂತೀ_ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಸ್ವರೂಪ ನೀನೆಯಾದ ಕಾರಣ; ಜಂಗಮ ಪ್ರಾಣಿಯಾಗಿ ಸದಾಚಾರಿಯಾದೆ, ಅದು ಕಾರಣ, ನೀನೆ ಸರ್ವಾಚಾರಸಂಪನ್ನನಾಗಿ, ಪೂರ್ವಾಚಾರಿ[ಯೂ] ನೀನೆಯಾದೆ, [ಅದು] ಕಾರಣ, ಗುಹೇಶ್ವರಲಿಂಗದಲ್ಲಿ ಚಂದಯ್ಯಂಗೆ. ಲಿಂಗದ ನಿಜವ ತಿಳುಹಾ ಸಂಗನಬಸವಣ್ಣಾ!
Transliteration Ādiyalli nīne guruvāda kāraṇa ninninda huṭṭittu liṅga. Ādiyalli nīne liṅgavāda kāraṇa ninninda huṭṭittu jaṅgama. Ādiyalli nīne jaṅgamavāda kāraṇa ninninda huṭṭittu prasāda. Ādiyalli nīne prasādiyāda kāraṇa ninninda huṭṭittu pādōdaka. Intī_guru liṅga jaṅgama prasāda pādōdaka svarūpa nīneyāda kāraṇa; jaṅgama prāṇiyāgi sadācāriyāde, adu kāraṇa, nīne sarvācārasampannanāgi, pūrvācāri[yū] nīneyāde, [adu] kāraṇa, guhēśvaraliṅgadalli candayyaṅge. Liṅgada nijava tiḷuhā saṅganabasavaṇṇā!
Music Courtesy: Album : Vachana Vaibhava Songs, Singer : Rajesh Krishnan, Devendhrakumar Mudhoal Music : M S Maruthi Label : Ashwini Audio
Hindi Translation आदि में तू ही गुरु होने से तुझसे पैदा हुआ था लिंग। आदि में तू ही लिंग होने से तुझसे पैदा हुआ था जंगम। आदि में तू ही जंगम होने से तुझसे पैदा हुआ था प्रसाद। आदि में तू ही प्रसादी होने से तुझ से पैदा हुआ था पदोदक। ऐसे गुरु, लिंग, जंगम, प्रसाद, पदोदक स्वरूप तू ही होने से जंगम प्राणी बने सदाचारी हुआ, उस कारण तू ही सर्वा चारसंपन्न होने से, पूर्वाचारी तू ही हुआ था, इस कारण, गुहेश्वरलिंग में चंदय्या को। लिंग का निजरूप बताओ संगनबसवण्णा। Translated by: Eswara Sharma M and Govindarao B N