Index   ವಚನ - 11    Search  
 
ಜಂಗಮವೆ ಮಹಾರುದ್ರಸ್ವರೂಪ ನೋಡಯ್ಯ. ಜಂಗಮವೆ ಪರಮಪಾವನ ಕರ್ತ ನೋಡಯ್ಯ. ಜಂಗಮವೆ ಷಟ್ಸ್ಥಲಬ್ರಹ್ಮ ನೋಡಯ್ಯ. ಜಂಗಮವೆ ಶರಣಚಿಂತಾಮಣಿ ಸಂಜೀವನ ನೋಡಯ್ಯ. ಜಂಗಮವೆ ಭವರೋಗವೈದ್ಯ ನೋಡಯ್ಯ ಜಂಗಮವೆ ಸಕಲೈಶ್ವರ್ಯ ನೋಡಯ್ಯ. ಜಂಗಮವೆ ಸಮರಸ ಸುಖಭೋಗಮೂರ್ತಿ ನೋಡಯ್ಯ. ಜಂಗಮವೆ ಕಾಯಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಇಂದ್ರಿಯಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಪ್ರಾಣಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಸರ್ವಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಪಾಪಪುಣ್ಯ ದೋಷರಹಿತ ನೋಡಯ್ಯ. ಜಂಗಮವೆ ಪರಿಪೂರ್ಣಚಿದೈಶ್ವರ್ಯ ನೋಡಯ್ಯಾ. ಜಂಗಮವೆ ನಿತ್ಯತ್ವಮೂರ್ತಿ ನೋಡಯ್ಯಾ. ಜಂಗಮವೆ ಜಯಮಂಗಳಸ್ವರೂಪ ನೋಡಯ್ಯ. ಜಂಗಮವೆ ಶುಭಮಂಗಳ ಸ್ವರೂಪ ನೋಡಯ್ಯ. ಜಂಗಮವೆ ಪಾವನಮೂರ್ತಿ ನೋಡಯ್ಯ. ಜಂಗಮವೆ ಪರುಷದ ಕಣಿ ನೋಡಯ್ಯ. ಜಂಗಮವೆ ನಿಜವಸ್ತು ನೋಡಯ್ಯ. ಜಂಗಮವೆ ಚಿತ್ಕಾರಣಾವತರ್ಯಮೂರ್ತಿ ನೋಡ ಸಂಗನಬಸವೇಶ್ವರ