Index   ವಚನ - 39    Search  
 
ಇಂತು ಸದ್ಗುರುಕರಜಾತರು ಪಂಚಪಾತಕ, ಪಂಚಸೂತಕವ ಹೊದ್ದಲಾಗದು ; ಶೈವಮಾರ್ಗವ ಮೆಟ್ಟಲಾಗದು; ಪ್ರಮಥರಾಚರಿಸಿದ ಸನ್ಮಾರ್ಗವನುಳಿದು ಶೈವ ಜಡಜೀವಿಗಳ ಮಾರ್ಗದ ಸೋಂಕಿನಲ್ಲಿ ಅರ್ಚನಾರ್ಪಣಕ್ರಿಯಗಳನಾಚರಿಸಲಾಗದು. ದಾಕ್ಷಿಣ್ಯದಿಂದ ಅನಾಚಾರ ದುರ್ಜೀವಿಗಳ ಸಮಪಙ್ತಿಯಲ್ಲಿ ಅರ್ಪಿತವ ಮಾಡಲಾಗದು. ಷಡ್ವಿಧ ಶೀಲವ್ರತಾಚಾರಹೀನರಲ್ಲಿ ಪಾದೋದಕ-ಪ್ರಸಾದವ ಕೊಳಲಾಗದು. ಪ್ರಮಥರಾಚರಿಸಿದ ಪೂಜಾಪೂಜಕತ್ವದಲ್ಲಿ ತಿಳಿದಾತನೆ ತ್ರಿಕೂಟಗಿರಿಸಂಗಮದಲ್ಲಿ ನೆಲಸಿರ್ಪ ಮಹಾಪ್ರಭು ತಾನೆ ನೋಡ ಸಂಗನಬಸವೇಶ್ವರ