Index   ವಚನ - 40    Search  
 
ಕಾಳಿಕಾದೇವಿ, ಚಾಮುಂಡಿ, ಗಂಗೆ, ಗೌರಿ, ಬನಶಂಕರಿ, ಎಲ್ಲಿ, ಏಕಲಾತಿ, ಹುಲಗಿ, ಹೊಸೂರಿ, ಸತ್ತವರು, ಹೆತ್ತವರು ಇಂತೀ ಹಲವು ಪಿಶಾಚಿಗಳ ಹೆಸರಿಂದ ಇದಿರಿಟ್ಟು ಆರಾಧಿಸಿ, ಅದರ ನೈವೇದ್ಯವೆಂದು ಶ್ರೀಗುರುವಿತ್ತ ಲಿಂಗಕ್ಕೆ ತೋರಿ ಭುಂಜಿಸುವ ಶಿವದ್ರೋಹಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ ಕಾಣಾ ಸಂಗನಬಸವೇಶ್ವರ.