Index   ವಚನ - 41    Search  
 
ಅಂಗದಮೇಲೆ ಲಿಂಗವ ಧರಿಸಿ, ಶಿವಭಕ್ತರೆಂದು ಹೇಳಿ, ಶಿವಾಚಾರಮಾರ್ಗವ ಬಿಟ್ಟು, ಭವಿಶೈವದೈವಗಳಿಗೆ ಲಿಂಗವಡಿಯಾಗಿ ಅಡ್ಡಬಿದ್ದು ಶರಣೆಂಬ ಹೊಲೆಯರಿಗೆ ಶಿವಭಕ್ತಜನ್ಮ ತೀರಿ, ಚಂದ್ರಸೂರ್ಯರುಳ್ಳನ್ನಕ್ಕರ ಇಪ್ಪತ್ತೆಂಟುಕೋಟಿ ನರಕ ತಪ್ಪದು. ಆ ನರಕ ತೀರಿದ ಬಳಿಕ ಶ್ವಾನ ಸೂಕರಜನ್ಮ ತಪ್ಪದು. ಆ ಜನ್ಮ ತೀರಿದ ಬಳಿಕ ರುದ್ರಪ್ರಳಯ ತಪ್ಪದೆಂದ ಕಾಣಾ ಸಂಗನಬಸವೇಶ್ವರ.